New Delhi: ಅನಿಲ್ ಅಂಬಾನಿ ಒಡೆತನದ ಕಂಪೆನಿಗಳ ಮೇಲೆ ಇ.ಡಿ. ದಾಳಿ
Friday, July 25, 2025
ಲೋಕಬಂಧು ನ್ಯೂಸ್, ನವದೆಹಲಿ
ಅನಿಲ್ ಅಂಬಾನಿ ಒಡೆತನಕ್ಕೆ ಸೇರಿರುವ ರಿಲಯನ್ಸ್ ಅನಿಲ್ ಧೀರೂಭಾಯಿ ಗ್ರೂಪ್ ಕಂಪನಿಗಳ ವಿರುದ್ಧದ 3 ಸಾವಿರ ಕೋಟಿ ಸಾಲ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಜು.24ರಂದು 35 ಸ್ಥಳಗಳಲ್ಲಿ ದಾಳಿ ನಡೆಸಿದೆ.ಸುಮಾರು 50 ಕಂಪೆನಿಗಳಿಗೆ ಸಂಬಂಧಿಸಿದಂತೆ 35 ಸ್ಥಳಗಳು ಹಾಗೂ 25 ಮಂದಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸ್. ಬ್ಯಾಂಕ್‌ನ ಅಧ್ಯಕ್ಷ ರಾಣಾ ಕಪೂರ್ ಸೇರಿದಂತೆ ಹಲವು ಬ್ಯಾಂಕ್ ಅಧಿಕಾರಿಗಳ ಮೇಲೂ ಇ.ಡಿ. ದಾಳಿ ನಡೆದಿರುವುದಾಗಿ ವರದಿಯಾಗಿದೆ.