
Belthangadi: ದೂರುದಾರನ ಬಂಧನ: ಮಟ್ಟೆಣ್ಣವರ್ ಸ್ವಾಗತ
Sunday, August 24, 2025
ಲೋಕಬಂಧು ನ್ಯೂಸ್, ಬೆಳ್ತಂಗಡಿ
ಧರ್ಮಸ್ಥಳ ಹೆಣ ಹೂಳಿದ ಪ್ರಕರಣದ ಸಾಕ್ಷಿ ದೂರುದಾರನನ್ನು ಎಸ್.ಐ.ಟಿ ತಂಡ ವಶಕ್ಕೆ ಪಡೆದಿರುವುದನ್ನು ಸ್ವಾಗತಿಸುತ್ತೇನೆ. ತನಿಖೆ ದೃಷ್ಟಿಯಿಂದ ಇದು ಉತ್ತಮ ವಿಚಾರ ಎಂದು ಗಿರೀಶ್ ಮಟ್ಟೆಣ್ಣವರ್ ಹೇಳಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕ್ಷಿ ದೂರುದಾರನನ್ನು ವಶಕ್ಕೆ ಪಡೆದ ಕಾರಣಕ್ಕೆ ಎಸ್.ಐ.ಟಿ ತನಿಖೆ ಬಗ್ಗೆ ಯಾವುದೇ ಅನುಮಾನ ಅಗತ್ಯವಿಲ್ಲ. ಎಸ್.ಐ.ಟಿ ತಂಡ ಅಗತ್ಯವಿದ್ದಲ್ಲಿ ಆತನ ಮಂಪರು ಪರೀಕ್ಷೆ ನಡೆಸಲಿ ಎಂದರು.
ಯಾವ ರೀತಿ ಬೇಕಾದರೂ ತನಿಖೆ ನಡೆಸಲಿ ಎಂದು ಆರಂಭದಲ್ಲಿಯೇ ಸಾಕ್ಷಿ ದೂರುದಾರ ಹೇಳಿದ್ದಾನೆ. ಅದನ್ನು ಹೋರಾಟಗಾರರೂ ಹೇಳಿದ್ದಾರೆ. ಅದಕ್ಕಾಗಿಯೇ ಎಸ್.ಐ.ಟಿ ರಚನೆಯಾಗಿದೆ. ಸಾಕ್ಷಿ ದೂರುದಾರ ಎಸ್.ಐ.ಟಿ ಮುಂದೆ ಏನು ಹೇಳಿಕೆ ನೀಡಿದ್ದಾನೆ ಎನ್ನುವುದನ್ನು ಎಸ್.ಐ.ಟಿ ಅಧಿಕಾರಿಗಳೇ ಹೇಳಬೇಕಾಗಿದೆ. ಅದರ ಬಗ್ಗೆ ತಿಳಿದಿಲ್ಲ.
ಇದು ಸತ್ಯದ ಪರವಾದ ಹೋರಾಟ. ಅದರಲ್ಲಿ ಸತ್ಯಕ್ಕೆ ಗೆಲುವು ಸಿಗುತ್ತದೆ ಎಂದರು.
ಸುಜಾತ ಭಟ್ ವಿಚಾರದಲ್ಲಿ ಅವರೇ ಹೇಳಿಕೆಗಳನ್ನು ನೀಡಿದ್ದಾರೆ. ಅದರ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಲಿ ಎಂದು ಮಟ್ಟೆಣ್ಣವರ್ ಹೇಳಿದರು.