Dharmastala: ಮುಂದುವರಿದ ಅಗೆತ: ದೊರೆಯದ ಕಳೇಬರ
Saturday, August 2, 2025
ಲೋಕಬಂಧು ನ್ಯೂಸ್, ಧರ್ಮಸ್ಥಳ
ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತ ದೇಹಗಳನ್ನು ಹೂಳಿರುವುದಾಗಿ ಅನಾಮಿಕ ವ್ಯಕ್ತಿಯೋರ್ವ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ಮುಂದುವರಿದಿದ್ದು, ಅನಾಮಿಕ ದೂರುದಾರ ಗುರುತಿಸಿದ 7ನೇ ಹಾಗೂ 8ನೇ ಜಾಗದಲ್ಲಿ ಕಳೇಬರಗಳ ಅವಶೇಷಗಳಿಗಾಗಿ ಶುಕ್ರವಾರ ಶೋಧ ನಡೆದಿದ್ದು ಯಾವುದೇ ಕುರುಹು ಪತ್ತೆಯಾಗಿಲ್ಲ.ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರ ವೆರೆಗೂ ನೇತ್ರಾವತಿ ಪ್ರದೇಶದಲ್ಲಿ ಎಸ್‌ಐಟಿ ಅಧಿಕಾರಿಗಳು ದೂರುದಾರರನ್ನು ಕರೆದುಕೊಂಡು ಬಂದು 20 ಮಂದಿ ಪೌರ ಕಾರ್ಮಿಕರಿಂದ ಮಿನಿ ಹಿಟಾಚಿ ಮೂಲಕ ಗುರುತು ಮಾಡಿದ ಪಾಯಿಂಟ್ ನಂಬ್ರ 7ರ ಜಾಗದಲ್ಲಿ ಕಾರ್ಯಾಚರಣೆ ನಡೆಸಿದರೆ ಯಾವುದೇ ರೀತಿಯ ಅಸ್ಥಿಪಂಜರವಾಗಲೀ, ಯಾವುದೇ ಮೂಳೆಗಳಾಗಲೀ ಅಥವಾ ಯಾವುದೇ ಕುರುಹು ದೊರೆಯಲಿಲ್ಲ.