
Mangaluru: ಧರ್ಮಸ್ಥಳ ಪ್ರಕರಣ: ದೂರುದಾರನಿಗೆ ಎಸ್ಐಟಿ ಅಧಿಕಾರಿ ಬೆದರಿಕೆ ಆರೋಪ- ತನಿಖಾ ತಂಡ ನಿರಾಕರಣೆ
Sunday, August 3, 2025
ಲೋಕಬಂಧು ನ್ಯೂಸ್, ಮಂಗಳೂರು
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ದೂರುದಾರರ ಪರ ವಕೀಲರು ವಿಶೇಷ ತನಿಖಾ ತಂಡ (ಎಸ್ಐಟಿ)ದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಎಸ್ಐಟಿಯಲ್ಲಿರುವ ಪೊಲೀಸ್ ಅಧಿಕಾರಿ ಮಂಜುನಾಥ ಗೌಡ ಎಂಬವರು ದೂರು ಹಿಂಪಡೆಯುವಂತೆ ಬೆದರಿಕೆ ಮತ್ತು ಒತ್ತಡ ಹೇರಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.