Mysore ದಸರಾ ಕವಿ ನಿಸಾರ್ ಉದ್ಘಾಟಿಸಿಲ್ಲವೇ?
Monday, August 25, 2025
ಲೋಕಬಂಧು ನ್ಯೂಸ್, ಮೈಸೂರು
ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಹಲವರು ಆಕ್ಷೇಪಿಸಿರುವುದನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ಖಂಡಿಸಿದ್ದು, ಕವಿ ನಿಸಾರ್ ಅಹ್ಮದ್ ಉದ್ಘಾಟಿಸಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ನಾಡಹಬ್ಬ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಅಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯವೇ? ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ದಸರಾ ಮಾಡಲಿಲ್ಲವೇ? ನಿಸಾರ್ ಅಹ್ಮದ್ ದಸರಾ ಉದ್ಘಾಟನೆ ಮಾಡಲಿಲ್ಲವೇ? ಅದಕ್ಕೆಲ್ಲಾ ತಕರಾರು ತೆಗೆಯಬಾರದು.
ಚಾಮುಂಡಿ ತಾಯಿಯನ್ನು ನಂಬುತ್ತಾರೆಯೋ, ಬಿಡುತ್ತಾರೆಯೋ? ಅದು ಅವರಿಗೆ ಸೇರಿದ್ದು. ಇದು ಊರ ಹಬ್ಬ, ಎಲ್ಲರೂ ಸೇರಿಯೇ ಹಬ್ವ ಮಾಡಬೇಕು ಎಂದರು.