
Mysore: ಮುಷ್ತಾಕ್ಗೆ ತಾಯಿ ಚಾಮುಂಡಿ ಬಗ್ಗೆ ನಂಬಿಕೆ ಇದೆಯೇ?
Monday, August 25, 2025
ಲೋಕಬಂಧು ನ್ಯೂಸ್, ಮೈಸೂರು
ಬಾನು ಮುಷ್ತಾಕ್ಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯೇ? ಅವರು ಚಾಮುಂಡಿ ಭಕ್ತೆ ಎಂದು ಹೇಳಿದ್ದಾರೆಯೇ ಎಂದು ಬಿಜೆಪಿ ನಾಯಕ, ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾನು ಮುಷ್ತಾಕ್ ಬಗ್ಗೆ ನಮಗೆ ಹೆಮ್ಮೆ ಇದೆ. ಮುಸ್ಲಿಮ್ ಎನ್ನುವ ಕಾರಣಕ್ಕೆ ನಾನು ಅಪಸ್ವರ ಎತ್ತುತ್ತಿಲ್ಲ. ಬಾನು ಮುಷ್ತಾಕ್ ಸಾಹಿತ್ಯದ ಬಗ್ಗೆ ಗೌರವವಿದೆ.
ದಸರಾ ಜಾತ್ಯತೀತತೆಯ ಪ್ರತೀಕ ಅಲ್ಲ. ಇದು ಧಾರ್ಮಿಕ ಆಚರಣೆ. ದಸರಾ ಶೇ.100 ಧಾರ್ಮಿಕ ಆಚರಣೆ. ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತದೆ' ಎಂದರು.
'ಇದು ಧಾರ್ಮಿಕ ಹಬ್ಬ. ಯದುವಂಶ ಆರಂಭಿಸಿದ ಧಾರ್ಮಿಕ ಹಬ್ಬ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ಕೊಡಲಾಗುತ್ತದೆ.
'ಭಕ್ತಿ ಭಾವದಿಂದ ಮಾಡುವ ಆಚರಣೆ ದಸರಾ. ತಾಯಿ ಚಾಮುಂಡಿ ಮೇಲೆ ಭಕ್ತಿ ತೋರ್ಪಡಿಸುವ ಹಬ್ಬ ಇದು. ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ಆಗುತ್ತಾರೆ? ಇದು ನನ್ನ ಪ್ರಶ್ನೆ. ಬದಲಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬಾನು ಮುಷ್ತಾಕ್ ಅವರನ್ನು ಘೋಷಿಸಿ. ಯಾರ ತಕರಾರೂ ಇಲ್ಲ' ಎಂದರು.