-->
Udupi: ಆ.27-30: ಅಂಬಲಪಾಡಿ 49ನೇ ವರ್ಷದ ಬಾಲಗಣೇಶೋತ್ಸವ

Udupi: ಆ.27-30: ಅಂಬಲಪಾಡಿ 49ನೇ ವರ್ಷದ ಬಾಲಗಣೇಶೋತ್ಸವ

ಲೋಕಬಂಧು ನ್ಯೂಸ್, ಉಡುಪಿ
ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿ ವತಿಯಿಂದ 49ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆ. 27ರಿಂದ 30ರ ವರೆಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಎದುರು ನಡೆಯಲಿದೆ.ಆ. 27ರಂದು ಬೆಳಗ್ಗೆ 10.35ಕ್ಕೆ ಗಣೇಶ ವಿಗ್ರಹ ಪ್ರತಿಷ್ಠೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಕದಳಿಸೇವೆ, ಸಂಜೆ 4.30ರಿಂದ ಅಮ್ಮ ಗ್ರೀಮ್ಸ್ ಮೆಲೋಡಿಸ್ ಅವರಿಂದ ಭಕ್ತಿಗೀತ ಗಾಯನ, ರಾತ್ರಿ 7ರಿಂದ ರಂಗಪೂಜೆ, 8ರಿಂದ ಅಂಬಲಪಾಡಿ 'ರಂಗಚಾವಡಿ' ತಂಡದವರಿಂದ 'ಮದಿಮೆದ ಇಲ್ಲಡ್' ತುಳು ನಾಟಕ ನಡೆಯಲಿದೆ.


28ರಂದು ಬೆಳಗ್ಗೆ 11ರಿಂದ ನಾಗಪೂಜೆ, ಮಹಾಪೂಜೆ, ರಾತ್ರಿ 7ರಿಂದ ರಂಗಪೂಜೆ, ಬಳಿಕ ಉಡುಪಿ ಅಭಿಜ್ಞಾ ನೃತ್ಯಭೂಮಿ ಟ್ರಸ್ಟ್ ಕಲಾವಿದರಿಂದ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿ ನಡೆಯಲಿದೆ.


29ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 7ರಿಂದ ರಂಗಪೂಜೆ, ಬಳಿಕ ಸೃಷ್ಟಿ ಕಲಾವಿದೆರ್ ಬಜಗೋಳಿ ಅಭಿನಯದ ತುಳು ನಾಟಕ 'ದೈವ ದೃಷ್ಟಿ' ಆ. 30ರಂದು ಬೆಳಗ್ಗೆ 10ಕ್ಕೆ ಗಣಯಾಗ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 4ರಿಂದ ಪ್ರಣವ್ ಅಡಿಗ ಅಂಬಲಪಾಡಿ ಅವರಿಂದ ವೇಣುನಾದ, ಸಂಜೆ 5.30ರಿಂದ ವಿಸರ್ಜನೆ ಪೂಜೆ, ವಿಸರ್ಜನೆ ಮೆರವಣಿಗೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article