.jpg)
Udupi: ಆ.4:ಮುದ್ದಿನ ಕೃಷ್ಣನಿಗೆ ಮುತ್ತಿನ ಕವಚ ಸಮರ್ಪಣೆ
Sunday, August 3, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ 37ನೇ ಜನ್ಮನಕ್ಷತ್ರ ಸೋಮವಾರ (ಆ.4) ನಡೆಯಲಿದ್ದು, ಆ ಪ್ರಯುಕ್ತ ಶ್ರೀಕೃಷ್ಣನಿಗೆ ಮುತ್ತಿನ ಕವಚ ತೊಡಿಸಲಾಗುವುದು.
ಅಲಂಕಾರ ಪ್ರಿಯನಾದ ಶ್ರೀಕೃಷ್ಣನಿಗೆ ನಿತ್ಯವೂ ವೈವಿಧ್ಯಮಯ ಅಲಂಕಾರಗಳನ್ನು ಮಾಡಿ ಅರ್ಚಿಸುವ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಜನ್ಮನಕ್ಷತ್ರ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಬರಮಾಡಿಕೊಂಡರು.
ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು.