
Udupi: ವಾರ್ತಾ ಇಲಾಖೆಯ ಪ್ರೇಮಾನಂದಗೆ ವಿದಾಯ
Tuesday, August 5, 2025
ಲೋಕಬಂಧು ನ್ಯೂಸ್, ಉಡುಪಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಕಚೇರಿಯಲ್ಲಿ ಸೇವಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ಪ್ರೇಮಾನಂದ ರಾವ್ ಸೇವಾ ನಿವೃತ್ತರಾಗಿದ್ದು, ಬೀಳ್ಕೊಡುಗೆ ಸಮಾರಂಭ ವಾರ್ತಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಪ್ರೇಮಾನಂದ ಅವರನ್ನು ಸನ್ಮಾನಿಸಿದ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಂಜುನಾಥ್, ಪ್ರೇಮಾನಂದ ರಾವ್ 1999ರಿಂದ ಉಡುಪಿ ಕಚೇರಿಯಲ್ಲಿಯೇ 26 ವರ್ಷ ಕಾಲ ಕರ್ತವ್ಯ ನಿರ್ವಹಿಸಿ, ಎಲ್ಲರೊಂದಿಗೆ ಅನ್ಯೋನ್ಯ ಸ್ನೇಹ ಹೊಂದಿದ್ದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಪ್ರೇಮಾನಂದ ಪತ್ನಿ ಶೋಭಾ ಇದ್ದರು.
ರೆಡ್ ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿ ಸ್ಮರಣಿಕೆ ನೀಡಿದರು.
ಕಚೇರಿಯ ಸಿಬ್ಬಂದಿಗಳಾದ ಹರೀಶ್ ಭಟ್, ಸತೀಶ್ ಶೇಟ್ ಮೊದಲಾದವರಿದ್ದರು.