-->
Udupi: ಸೆ.20-23: ರಾಜ್ಯ ಮಟ್ಟದ ಕಬ್-ಬುಲ್ ಬುಲ್ ಉತ್ಸವ

Udupi: ಸೆ.20-23: ರಾಜ್ಯ ಮಟ್ಟದ ಕಬ್-ಬುಲ್ ಬುಲ್ ಉತ್ಸವ

ಲೋಕಬಂಧು ನ್ಯೂಸ್, ಉಡುಪಿ
ಪಾಜಕ ಕುಂಜಾರುಗಿರಿ ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಕಬ್-ಬುಲ್ ಬುಲ್ ಉತ್ಸವ ಸೆ. 20ರಿಂದ 23ರ ವರೆಗೆ ನಡೆಯಲಿದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ 750ಕ್ಕೂ ಹೆಚ್ಚು ಮಕ್ಕಳು, ಸುಮಾರು 250 ಶಿಕ್ಷಕರು, ಸಿಬ್ಬಂದಿ ಹಾಗೂ ಫ್ಲಾಕ್ ಮಾಸ್ಟರ್‌ಗಳು ಭಾಗವಹಿಸಲಿದ್ದಾರೆ.ಈ ಉತ್ಸವ ಕೇವಲ ಮಕ್ಕಳ ಕೌಶಲ್ಯ ಪ್ರದರ್ಶನಕ್ಕೆ ಸೀಮಿತವಲ್ಲ, ಬದಲಿಗೆ ನಮ್ಮ ಕರಾವಳಿಯ ಸಂಸ್ಕೃತಿ, ಸ್ಥಳೀಯ ಪಾಕಕಲೆ, ಕಲೆ, ಕೈಗಾರಿಕೆ, ಹೊರಾಂಗಣ ಜೀವನ ಶೈಲಿ ಇತ್ಯಾದಿಗಳನ್ನು ಮಕ್ಕಳಿಗೆ ಪರಿಚಯಿಸುವ ವಿಶೇಷ ಪ್ರಯತ್ನವಾಗಿದೆ. ಜೊತೆಗೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಲ್ಲಿ ಸಾಂಸ್ಕೃತಿಕ ಅರಿವು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನು ಬೆಳೆಸುವುದು ಕಾರ್ಯಕ್ರಮದ ಆಶಯಗಳಲ್ಲೊಂದು.


ರಾಜ್ಯ ಮಟ್ಟದ ಈ ಉತ್ಸವ ಮಕ್ಕಳಲ್ಲಿ ತಂಡ ಭಾವನೆ, ಸೇವಾ ಮನೋಭಾವ, ಸಾಹಸ ಪ್ರಿಯತೆ ಹಾಗೂ ಸಂಸ್ಕೃತಿ ಅರಿವು ಬೆಳೆಸುವ‌‌ ವೇದಿಕೆಯಾಗಲಿದೆ.


ಕರ್ನಾಟಕದ ವಿವಿಧೆಡೆಗಳಿಂದ ಆಗಮಿಸುವ ಕಬ್ - ಬುಲ್ ಬುಲ್ ಮಕ್ಕಳು ಒಂದೇ ವೇದಿಕೆಯಲ್ಲಿ ಸೇರುವುದರಿಂದ ‘ಏಕತೆಯಲ್ಲಿ ವೈವಿಧ್ಯತೆ’ ಎಂಬ ಸಂದೇಶವನ್ನು ಬಲಪಡಿಸುವುದು ಇದರ ವಿಶೇಷತೆ.


ಆನಂದತೀರ್ಥ ವಿದ್ಯಾಲಯ ಆತಿಥ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಮೂಲಕ ಈ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಸಜ್ಜಾಗಿದೆ ಎಂದು ಆನಂದತೀರ್ಥ ವಿದ್ಯಾಲಯದ ಪ್ರಾoಶುಪಾಲೆ ಗೀತಾ ಶಶಿಧರ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article