
Udupi: ಕೃಷ್ಣಾವತಾರದಲ್ಲಿ ಜ್ಞಾನಬಲ ಕಾರ್ಯ
Sunday, September 14, 2025
ಲೋಕಬಂಧು ನ್ಯೂಸ್, ಉಡುಪಿ
ಭಗವಂತನ ದಶಾವತಾರಗಳಲ್ಲಿ ಶ್ರೀಕೃಷ್ಣನ ಅವತಾರ ಆಕರ್ಷಕ ಅವತಾರ ಮತ್ತು ರೂಪವಾಗಿದೆ. ಒಂದೊಂದು ಅವತಾರದಿಂದ ಒಂದೊಂದು ಉದ್ಧಾರದ ಕೆಲಸವಾದರೆ ಕೃಷ್ಣಾವತಾರದಲ್ಲಿ ಜ್ಞಾನಬಲ ಕಾರ್ಯ ಸಾಧಿತವಾಗಿದೆ ಎಂದು ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ ನೀಡಿದ ಅವರು, ಬಾಲ ಲೀಲೆ ಶ್ರೀಕೃಷ್ಣ ಅವತಾರದ ವೈಶಿಷ್ಟ್ಯ. ಎಲ್ಲರಿಗೂ ಪ್ರಿಯನಾದ ಕೃಷ್ಣ, ಪಾರಮ್ಯ ಮೆರೆದಿದ್ದಾನೆ. ಜಗದ ಜನರ ಉದ್ಧಾರ, ಧರ್ಮ ಸಂಸ್ಥಾಪನೆ, ದುಷ್ಟರ ನಾಶ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಗೀತಾ ಜ್ಞಾನದ ಚಿಂತನೆಯಾಗಲಿ. ಶ್ರೀಕೃಷ್ಣ, ಮುಖ್ಯಪ್ರಾಣರು ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದವರು ಹಾರೈಸಿದ್ದಾರೆ.