ಲೋಕಬಂಧು ನ್ಯೂಸ್, ಉಡುಪಿ
ಅಖಿಲ ಭಾರತ ಜೀವ ವಿಮಾ ನೌಕರರ ಸಂಘ (ಆಲ್ ಇಂಡಿಯಾ ಲೈಫ್) ದ 27ನೇ ರಾಷ್ಟ್ರ ಮಟ್ಟದ ದ್ವೈವಾರ್ಷಿಕ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕರಾವಳಿ ಜಂಕ್ಷನ್ ಬಳಿಯ ಮಣಿಪಾಲ ಇನ್ ರಂಜಿತಾ ಪ್ಯಾಲೆಸ್ನಲ್ಲಿ ನಡೆದ ಎರಡು ದಿನಗಳ ಸಮ್ಮೇಳನವನ್ನು ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ವಿಮಾ ವಲಯದ ಉಸ್ತುವಾರಿ ಸೋಮೇಶ್ ಬಿಸ್ವಾಸ್ ಉದ್ಘಾಟಿಸಿದರು.
ಕಾರ್ಮಿಕ ಹಿತದೊಂದಿಗೆ ರಾಷ್ಟ್ರ ಹಿತ ಎಂಬ ಆಶಯದೊಂದಿಗೆ ಕಳೆದ 7 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ತಮ್ಮ ಸಂಘಟನೆ, ಸಂಸ್ಥೆಯ ನೌಕರರ ಹಿತ ಕಾಪಾಡುವಲ್ಲಿ ಆದ್ಯತೆ ನೀಡುತ್ತಿದೆ. ನೌಕರರು ತಮ್ಮ ಕರ್ತವ್ಯದ ಸಮರ್ಥ ನಿರ್ವಹಣೆ ಜೊತೆಗೆ ಹಕ್ಕುಗಳ ಬಗ್ಗೆ ಹೋರಾಡಬೇಕು ಎಂದು ಬಿಸ್ವಾಸ್ ಕಿವಿಮಾತು ಹೇಳಿದರು.
ಆಲ್ ಇಂಡಿಯಾ ಲೈಫ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಕ್ಡಾವಾಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ವಿಭಾಗೀಯ ಕಾರ್ಯದರ್ಶಿ ಕವಿತಾ ಉದಯ್ಶಂಕರ್, ಜಿಲ್ಲಾಧ್ಯಕ್ಷ ಲಕ್ಷ್ಮಣ್, ಸಂಘಟನೆ ಕೋಶಾಧಿಕಾರಿ ಬಾಲಕೃಷ್ಣ ಶೆಣೈ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ವೇಗಸ್ ಸ್ವಾಗತಿಸಿ, ಸಮ್ಮೇಳನದಲ್ಲಿ ಎಲ್ಐಸಿ ನೌಕರರು ಮತ್ತು ಎಲ್ಐಸಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಖ್ಯವಾಗಿ ಡಿಜಿಟಲೀಕರಣ ಮತ್ತು ಡಿ ಗ್ರೂಪ್ ಹುದ್ದೆಗಳ ನೇಮಕಾತಿ ಬಗ್ಗೆ ಚರ್ಚಿಸಲಾಗುವುದು ಎಂದರು. ಸಿತಾರಾ ನಿರೂಪಿಸಿದರು.
ದೇಶದಾದ್ಯಂತದ ಎಲ್ಐಸಿಯ 150ಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸಿದ್ದಾರೆ.

.jpg)
.jpg)