.jpg)
ಅಸು ನೀಗಿದ ಅಶ್ವಿನಿ ಶೆಟ್ಟಿ
Tuesday, July 16, 2024
ಅಸು ನೀಗಿದ ಅಶ್ವಿನಿ ಶೆಟ್ಟಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಅಂಬಲಪಾಡಿ ಗಾಂಧಿ ನಗರದಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮನೆಯೊಡತಿ ಅಶ್ವಿನಿ ಶೆಟ್ಟಿ (47 ವರ್ಷ) ಮಂಗಳವಾರ ಅಸು ನೀಗಿದರು.ಮನೆಯೊಡೆಯ ರಮಾನಂದ ಶೆಟ್ಟಿ ಸೋಮವಾರವೇ ಅಸು ನೀಗಿದ್ದರು.
ಬಂಟರ ಸಂಘ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತುಳುನಾಡಿನ ಆಚಾರ ವಿಚಾರಗಳನ್ನು ಬಿಂಬಿಸುವ ವೀಡಿಯೊಗಳನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿ ಖ್ಯಾತಿ ಗಳಿಸಿದ್ದರು.
ಘಟನೆಯಲ್ಲಿ ಘಾಸಿಗೊಂಡಿರುವ ಮಕ್ಕಳಾದ ಹಂಸಿಜಾ (20) ಮತ್ತು ಅಭಿಕ್ (16) ಪಾರಾಗಿದ್ದಾರೆ. ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂತಾಪ
ಅಶ್ವಿನಿ ಶೆಟ್ಟಿ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.
ದಂಪತಿಗಳೀರ್ವರ ಅಂತ್ಯಕ್ರಿಯೆ ಮಂಗಳವಾರ ನಡೆಯಿತು.