.jpg)
ಶ್ರೀಕೃಷ್ಣ ಮಹಾಭಿಷೇಕ ಸಂಪನ್ನ
Tuesday, July 16, 2024
ಶ್ರೀಕೃಷ್ಣ ಮಹಾಭಿಷೇಕ ಸಂಪನ್ನ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಹಾಭಿಷೇಕ ನಡೆಸಿದರು.
ಶ್ರೀಕೃಷ್ಣನಿಗೆ ಹಾಲು, ಮೊಸರು, ತುಪ್ಪ, ಜೇನು ಮತ್ತು ಸಕ್ಕರೆಯುಕ್ತವಾಗಿ ಪಂಚಾಮೃತ ಅಭಿಷೇಕ ನಡೆಸಲಾಯಿತು.
ಬಳಿಕ ಸೀಯಾಳ (ಎಳನೀರು) ಅಭಿಷೇಕ ನಡೆಸಲಾಯಿತು.
ಶ್ರೀಕೃಷ್ಣನಿಗೆ ಪಟ್ಟಾಭಿಕೃಷ್ಣ ಅಲಂಕಾರ ಮಾಡಲಾಗಿತ್ತು.
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.