
Padubidri: ಉಚ್ಚಿಲ ದಸರಾ ಮರಳು ಶಿಲ್ಪ ಕಲಾಕೃತಿ
Monday, September 22, 2025
ಲೋಕಬಂಧು ನ್ಯೂಸ್, ಪಡುಬಿದ್ರಿ
ಉಚ್ಚಿಲ ದಸರಾ ಪ್ರಯುಕ್ತ 6 ಅಡಿ ಎತ್ತರ 12 ಅಡಿ ಅಗಲವುಳ್ಳ ಶಾರದೆ ಮತ್ತು ಉಚ್ಚಿಲ ದಸರಾ ರೂವಾರಿ ಡಾ.ಜಿ.ಶಂಕರ್ ಭಾವಶಿಲ್ಪದೊಂದಿಗೆ ಉಡುಪಿ-ಉಚ್ಚಿಲ ದಸರಾ ಮೆರುಗು ಸಾರುವ ಬೃಹತ್ ಮರಳು ಶಿಲ್ಪ ಕಲಾಕೃತಿಯನ್ನು ಉಡುಪಿ ಸ್ಯಾಂಡ್ ಥೀಂ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಪರಿಸರದಲ್ಲಿ ರಿತೇಶ್ ಕಿದಿಯೂರು ಸಹಕಾರದೊಂದಿಗೆ ರಚಿಸಿದ್ದು,ಅದು ಕಲಾರಸಿಕರ ಗಮನ ಸೆಳೆಯುತ್ತಿದೆ.