
Parkala: ತೆನೆಪೂಜೆ ಸಂಪನ್ನ
Tuesday, September 23, 2025
ಲೋಕಬಂಧು ನ್ಯೂಸ್, ಉಡುಪಿ
ನವರಾತ್ರಿ ಪರ್ವಕಾಲದಲ್ಲಿ ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತೆನೆ (ಕದಿರು) ಕಟ್ಟುವ ಹಬ್ಬವನ್ನು ಸೋಮವಾರ ಆಚರಿಸಲಾಯಿತು.
ಗದ್ದೆಗಳಿಂದ ಭತ್ತದ ತೆನೆಗಳನ್ನು ವಿಜೃಂಭಣೆಯಿಂದ ದೇವಳಕ್ಕೆ ತಂದು ಪೂಜಿಸಿ, ನಂತರ ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ಶ್ರೀನಿವಾಸ ಉಪಾಧ್ಯಾಯ, ಮುರಳೀಧರ ನಕ್ಷತ್ರಿ, ಮಂಜುನಾಥ ಉಪಾಧ್ಯಾಯ, ನಟರಾಜ್ ಪರ್ಕಳ, ಸುಧಾಕರ ಪೂಜಾರಿ, ಕೀರ್ತಿ ಮೊದಲಾದವರಿದ್ದರು.
ಪರ್ಕಳ, ಮಣಿಪಾಲ, ಸರಳಬೆಟ್ಟು ಮತ್ತು ಬಡಗಬೆಟ್ಟು ಪರಿಸರದ ಸಾರ್ವಜನಿಕರು ಪಾಲ್ಗೊಂಡಿದ್ದರು.