kodavur: ನೂತನ ಸಮುದಾಯ ಭವನ ಶಿಲಾನ್ಯಾಸ
Tuesday, September 23, 2025
ಲೋಕಬಂಧು ನ್ಯೂಸ್, ಮಲ್ಪೆ
ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಸಮುದಾಯ ಭವನದ ಶಿಲಾನ್ಯಾಸವನ್ನು ಸೋಮವಾರ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನೆರವೇರಿಸಿದರು.ಬಳಿಕ ಆಶೀರ್ವಚನ ನೀಡಿದ ಅವರು, ದೇವಸ್ಥಾನದ ವತಿಯಿಂದ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದಲ್ಲಿ ಸತ್ಕಾರ್ಯಗಳು ನಿರಂತರ ನಡೆಯುತ್ತಿರಲಿ. ಇಲ್ಲಿ ನಡೆಯುವ ಎಲ್ಲ ಕಾರ್ಯಗಳಿಗೆ ಹಾಗೂ ಸೇವಾದಾರರಿಗೆ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹರಸಿದರು.
ಉದ್ಯಮಿ ಶ್ರೀಧರ್ ಕಲ್ಮಾಡಿ ಪುಣೆ ಅವರು ನೂತನ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇವಸ್ಥಾನಗಳು ಅಭಿವೃದ್ದಿಯಾದಾಗ ಆ ಊರು ಅಭಿವೃದ್ದಿಗೊಳ್ಳಲು ಸಾಧ್ಯ. ಈ ನೂತನ ಯೋಜನೆಗೆ ಸರಕಾರದ ಮಟ್ಟದಲ್ಲಿ ಗರಿಷ್ಠ ಅನುದಾನ ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ಕೊಡವೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಚಿಂತಕ ಶ್ರೀಶ ಭಟ್ ಕಡೆಕಾರ್, ದೇವಸ್ಥಾನದ ಪ್ರಧಾನ ತಂತ್ರಿ ಪುತ್ತೂರು ವಾದಿರಾಜ ತಂತ್ರಿ, ಮಲ್ಪೆ ಉದ್ಯಮಿ ಆನಂದ ಪಿ. ಸುವರ್ಣ, ಭಕ್ತವೃಂದ ಅಧ್ಯಕ್ಷ ದಿವಾಕರ ಶೆಟ್ಟಿ ತೋಟದಮನೆ, ಕೋಶಾಧಿಕಾರಿ ರಾಮ ಶೇರಿಗಾರ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಶ್ರೀಶ ಭಟ್ ಕೊಡವೂರು, ಸುಂದರ್ ಜೆ. ಕಲ್ಮಾಡಿ ಮತ್ತು ಯೋಗೀಶ್ ಸಾಲ್ಯಾನ್, ಕರ್ಕೇರ ಇಂಜಿನಿಯರಿಂಗ್'ನ ಪ್ರಕಾಶ್ ಕರ್ಕೇರ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಬಂಗೇರ ಕಲ್ಮಾಡಿ, ಆಶಾ ಚಂದ್ರಶೇಖರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ಭಾಸ್ಕರ್ ಪಾಲನ್, ರಾಜ ಸೇರಿಗಾರ, ವಾದಿರಾಜ್ ಸಾಲ್ಯಾನ್, ಯಶೋದರ ಸಾಲ್ಯಾನ್, ಕೆ. ಬಾಬ, ಉಷಾ ಆನಂದ್ ಮತ್ತು ಶೀಲಾ ಕೆ. ದೇವಾಡಿಗ, ಸೇವಾ ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ಕೊಡವೂರು ಮೊದಲಾದವರಿದ್ದರು.
ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕೊಡವೂರು ವಂದಿಸಿದರು.