
Padubidri: ಉಚ್ಚಿಲ ದಸರಾದಲ್ಲಿ 'ಸು ಫ್ರಮ್ ಸೋ' ತಂಡ
Tuesday, September 23, 2025
ಲೋಕಬಂಧು ನ್ಯೂಸ್, ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳ ವಠಾರದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಸಂಭ್ರಮದಲ್ಲಿ 'ಸು ಫ್ರಮ್ ಸೋ' ಚಿತ್ರ ತಂಡ ಸೋಮವಾರ ಭಾಗವಹಿಸಿ, ನೆರೆದ ಸಹಸ್ರಾರು ಭಕ್ತರ ಗಮನ ಸೆಳೆಯಿತು.
ಶ್ರೀಕ್ಷೇತ್ರದ ಶಾಲಿನಿ ಡಾ.ಜಿ.ಶಂಕರ್ ವೇದಿಕೆಯಲ್ಲಿ ಚಿತ್ರ ತಂಡದ ಎಲ್ಲ ಸದಸ್ಯರನ್ನು ದಸರಾ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಹಾಗೂ ದಸರಾ ಉತ್ಸವ ರೂವಾರಿ ನಾಡೋಜ ಡಾ.ಜಿ.ಶಂಕರ್ ಗೌರವಿಸಿದರು.
ಶಾಲಿನಿ ಡಾ.ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ದಸರಾ ಸಮಿತಿ ಸಂಚಾಲಕ ವಿನಯ ಕರ್ಕೇರ, ಮಹಿಳಾ ವಿಭಾಗದ ಸಂಚಾಲಕಿ ಸಂಧ್ಯಾದೀಪ ಸುನಿಲ್, ಉಷಾರಾಣಿ, ಸುಗುಣಾ ಕರ್ಕೇರ, ಗಿರಿಧರ್ ಸುವರ್ಣ, ಶರಣ್ ಕುಮಾರ್ ಮಟ್ಟು, ಕಿರಣ್ ಕುಮಾರ್ ಉದ್ಯಾವರ, ಸತೀಶ್ ಅಮೀನ್ ಪಡುಕರೆ, ಸು ಫ್ರಮ್ ಸೋ ತಂಡದ ನಿರ್ಮಾಪಕ ರವಿ ರೈ, ಕಲಾವಿದರಾದ ಜೆ.ಪಿ. ತೂಮಿನಾಡ್, ಪುಷ್ಪರಾಜ್ ಬೋಳಾರ್, ವಿಶ್ವನಾಥ್ ಅಸೈಗೋಳಿ, ಪೂರ್ಣಿಮಾ ಸುರೇಶ್, ಶಶಿರಾಜ್ ಉಚ್ಚಿಲ, ಪ್ರವೀಣ್ ಶ್ರೀಯಾನ್, ಪ್ರತೀಕ್ ಅತ್ತಾವರ್, ಅರ್ಪಿತ್ ಅತ್ತಾವರ್, ವಿಜಯ ಕುಮಾರ್ ಶೆಟ್ಟಿ ಶಮಿಲ್ ಬಂಗೇರ, ಲತೀಶ್ ದೇವಾಡಿಗ, ದೀಕ್ಷಿತ್ ಕುಲಾಲ್, ರೋಹಿತ್ ಶೆಟ್ಟಿ, ಶ್ರವಣ್ ಸುರತ್ಕಲ್ ಉಪಸ್ಥಿತರಿದ್ದರು.