ಕೇಂದ್ರದ ಸುಧಾರಣೆ ನಾಗರಿಕ ಕೇಂದ್ರಿತ

ಲೋಕಬಂಧು ನ್ಯೂಸ್, ನವದೆಹಲಿ
ಭಾರತದಲ್ಲಿ ನಡೆಯುತ್ತಿರುವ ಸುಧಾರಣೆಗಳು ಸರ್ಕಾರದ ಸುಧಾರಣೆಗಳು ಕೇವಲ ಆರ್ಥಿಕ ಅಥವಾ ಆದಾಯ ಕೇಂದ್ರಿತವಲ್ಲ, ಸಂಪೂರ್ಣವಾಗಿ ನಾಗರಿಕ ಕೇಂದ್ರಿತವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.ಮಂಗಳವಾರ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು,‌ ಕೇಂದ್ರ ಸರ್ಕಾರದ ಸುಧಾರಣೆಗಳು ಎಕ್ಸ್‌ಪ್ರೆಸ್‌ ರೈಲಿನ ವೇಗದಲ್ಲಿ ಓಡುತ್ತಿವೆ. ನಮ್ಮದು ರಿಫಾರ್ಮ್ ಎಕ್ಸ್‌ಪ್ರೆಸ್‌ ಎಂದು ವ್ಯಾಖ್ಯಾನಿಸಿದರು.


ಸುಧಾರಣೆಗಳು ವೇಗವಾಗಿ ಮುನ್ನುಗ್ಗುತ್ತಿದ್ದು, ಸಾಮಾನ್ಯ ನಾಗರಿಕರ ದೈನಂದಿನ ಕಷ್ಟಗಳನ್ನು ನಿವಾರಿಸುವುದು ನಮ್ಮ ಗುರಿ ಎಂದರು.