ಲೋಕಬಂಧು ನ್ಯೂಸ್, ವಾಷಿಂಗ್ಟನ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಅಕ್ಕಿಯ ಮೇಲೆ ಕಣ್ಣಿಟ್ಟಿದ್ದು ಅಮೆರಿಕದಲ್ಲಿ ಭಾರತದ ಅಕ್ಕಿಯನ್ನು ಡಂಪ್ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದು, ಟ್ಯಾರಿಫ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾರೆ.ಭಾರತದ ಹೆಚ್ಚಿನ ಸರಕುಗಳ ಮೇಲೆ ಅಮೆರಿಕ ಶೇ.50ರಷ್ಟು ಟ್ಯಾರಿಫ್ ಹಾಕುತ್ತಿದೆ. ಅಕ್ಕಿಯ ಮೇಲೆ ಶೇ. 53ರಷ್ಟು ಟ್ಯಾರಿಫ್ ಇದೆ. ಅದರ ಮೇಲೆ ಇನ್ನೂ ಅಧಿಕ ಸುಂಕ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ.