ದೊಂದಿ ಬೆಳಕಿನಲ್ಲಿ ನಾಗಮಂಡಲ ಸುಸಂಪನ್ನ

ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಫೆಬ್ರವರಿ 21ರಂದು ಶನಿವಾರ ರಾತ್ರಿ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ಸಂಪನ್ನಗೊಂಡಿತು.ಗೋಧಾಮದ ಸುಂದರ ಪ್ರಕೃತಿಯ ಪದತಲದಲ್ಲಿ ನಡೆದ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.


ವಿದ್ವಾನ್‌ ಕೊರಂಗ್ರಪಾಡಿ ಕೆ.ಪಿ. ಕುಮಾರಗುರು ತಂತ್ರಿ ನೇತ್ರತ್ವದಲ್ಲಿ ವಾಸುದೇವ ಭಟ್‌ ಸಹಯೋಗದೊಂದಿಗೆ ನಾಗ ಪಾತ್ರಿ ರಾಮಚಂದ್ರ ಕುಂಜಿತ್ತಾಯ ಮತ್ತು ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯ ಅವರ ಮೇಳದೊಂದಿಗೆ ಹಾಲಿಟ್ಟು ಸೇವೆ, ಏಕಪವಿತ್ರ ಶೀಮನ್ನಾಗಮಂಡಲ ಸೇವೆ ನಡೆಯಿತು.


ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್‌. ಆಚಾರ್‌, ಅನುಷಾ ಆಚಾರ್‌, ಪ್ರಜ್ವಲ್‌ ಆಚಾರ್‌, ಪೂಜಾ ಆಚಾರ್‌, ತೇಜಸ್‌ ಆಚಾರ್‌, ರಕ್ಷತ್‌ ಆಚಾರ್‌ ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ದಾಮೋದರ ಶರ್ಮ ಬಾರ್ಕೂರು, ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಗಣ್ಯ ಪ್ರಮುಖರು, ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.