ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಮೂಡುಬಿದಿರೆ ಎಸ್.ಕೆ.ಎಫ್. ಆಡಳಿತ ನಿರ್ದೇಶಕ ಡಾ.ಜಿ. ರಾಮಕೃಷ್ಣ ಆಚಾರ್ ನೇತೃತ್ವದಲ್ಲಿ ಫೆ.19ರಿಂದ 21ರ ವರೆಗೆ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲ ಸ್ಥಳಕ್ಕೆ ಫೆ.18ರಂದು ಬುಧವಾರ ಹತ್ತು ಮಂದಿ ನಾಗಾಸಾಧುಗಳು ದಿಢೀರ್ ಭೇಟಿ ನೀಡಿ ನಾಗಮಂಡಲ ಮಹೋತ್ಸವದ ಯಶಸ್ಸಿಗೆ ಶುಭ ಹಾರೈಸಿದರು.ಮುನಿಯಾಲು ಗೋಧಾಮಕ್ಕೆ ನಾಗಾಸಾಧುಗಳ ಈ ಭೇಟಿ ಪವಾಡ ಎಂದೇ ಭಾವಿಸಲಾಗಿದೆ.
ಈ ಸಂದರ್ಭದಲ್ಲಿ ಸಂಜೀವಿನಿ ಗೋಧಾಮದ ಸವಿತಾ ಆರ್. ಆಚಾರ್, ರಕ್ಷತ್ ಆರ್ ಆಚಾರ್, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಪದಾಧಿಕಾರಿಗಳು, ಉಪ ಸಮಿತಿಯ ಪ್ರಮುಖರು, ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.