ಐಎಎಸ್ ಅಧಿಕಾರಿಗೆ 3 ಮದುವೆ: ಮೂವರೂ ಐಎಎಸ್!

ಲೋಕಬಂಧು ನ್ಯೂಸ್, ಭೋಪಾಲ್
ಮಧ್ಯಪ್ರದೇಶದ ಐಎಎಸ್ ಅಧಿಕಾರಿ ಅವಿ ಪ್ರಸಾದ್ ಎಂಬವರು ಮೊದಲ ಇಬ್ಬರು ಪತ್ನಿಯರಿಂದ ವಿಚ್ಛೇದನ ಪಡೆದ ನಂತರ ಇತ್ತೀಚೆಗಷ್ಟೇ 3ನೇ ಮದುವೆಯಾಗಿದ್ದಾರೆ!
ವಿಶೇಷವೆಂದರೆ ಆ ಮೂವರೂ ಮಹಿಳೆಯರು ಐ.ಎ.ಎಸ್ ಅಧಿಕಾರಿಗಳೇ ಆಗಿದ್ದಾರೆ.ಪ್ರಸ್ತುತ ಮಧ್ಯಪ್ರದೇಶದ ಉದ್ಯೋಗ ಖಾತ್ರಿ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಅವಿ ಪ್ರಸಾದ್ ರಾಜ್ಯ ಸಚಿವಾಲಯದ ಉಪ ಕಾರ್ಯದರ್ಶಿ ಅಂಕಿತಾ ಧಾಕ್ರೆ ಅವರನ್ನು ಫೆ. 11ರಂದು 3ನೇ ಮದುವೆಯಾದರು.


ಮೊದಲ ಮದುವೆ ಮಧ್ಯಪ್ರದೇಶದ ರಿಜು ಬಾಫ್ನಾ ಹಾಗೂ 2ನೇ ಮದುವೆ ಉತ್ತರ ಪ್ರದೇಶದ ಮಿಶಾ ಸಿಂಗ್‌ ಅವರೊಂದಿಗೆ ನಡೆದಿತ್ತು.