ಫೆ.25ರಂದು ಕಾರ್ಕಳಕ್ಕೆ ಸಿಎಂ ಸಿದ್ದರಾಮಯ್ಯ

ಲೋಕಬಂಧು ನ್ಯೂಸ್, ಉಡುಪಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 25ರಂದು ಜಿಲ್ಲೆಗೆ ಆಗಮಿಸಿ, ಕಾರ್ಕಳ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಂದು ಬೆಳಿಗ್ಗೆ 11.30ಕ್ಕೆ ಕಾರ್ಕಳ ಕಾಡಬೆಟ್ಟುನಲ್ಲಿ ಅಂಬೇಡ್ಕ‌ರ್ ಭವನ ಉದ್ಘಾಟನೆ, ಅನಂತರ ಕುಕ್ಕುಂದೂರಿನಲ್ಲಿ ಮಹಾತ್ಮ ಗಾಂಧಿ ವಸತಿ ಶಾಲೆಯ ಕಿಸಾನ್ ಸಭಾಂಗಣ ಉದ್ಘಾಟನೆ ಹಾಗೂ ಶಾಲೆಯ 35ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.


ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಿರ್ಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ‌ಕಚೇರಿ ಪ್ರಕಟನೆ ತಿಳಿಸಿದೆ.