ಅನಂತೇಶ್ವರ ದೇವಳ ಧ್ವಜಾರೋಹಣ

ಉಡುಪಿ | ಲೋಕಬಂಧು ನ್ಯೂಸ್
ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟ ಇಲ್ಲಿನ ರಥಬೀದಿಯ ಶ್ರೀ ಅನಂತೇಶ್ವರ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ ಮಹಾಶಿವರಾತ್ರಿಯ ಪರ್ವದಿನವಾದ ಭಾನುವಾರ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು.
ಮಹೋತ್ಸವ ಅಂಗವಾಗಿ ವಿಶೇಷ ಪೂಜೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಮಠದ ದಿವಾನ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ವೆಂಕಟೇಶ ಆಚಾರ್ಯ ಮೊದಲಾದವರಿದ್ದರು.