ಕೃಷ್ಣಮಠದಲ್ಲಿ ಶಿವರಾತ್ರಿ ಆಚರಣೆ

ಉಡುಪಿ | ಲೋಕಬಂಧು ನ್ಯೂಸ್
ಕೃಷ್ಣಮಠದ ಇತಿಹಾಸದಲ್ಲೇ ಮೊದಲ ಬಾರಿಗೆ ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಕೃಷ್ಣಮಠದಲ್ಲಿ ಭಾನುವಾರ ಮಹಾಶಿವರಾತ್ರಿ ಮಹೋತ್ಸವ ಆಚರಿಸಲಾಯಿತು.
ಜಾಗರಣೆ ಸಹಿತ ಶಿವರಾತ್ರಿ ಆಚರಣೆ ಮಾಡಲಾಗಿದ್ದು, ಸಂಜೆ 6ರಿಂದ ಸೋಮವಾರ ಬೆಳಿಗ್ಗೆ 6 ಗಂಟೆ ವರೆಗೆ ಶಿವರಾತ್ರಿ ಆಚರಣೆ ಮಾಡಲಾಯಿತು.
ಮಹಾಶಿವರಾತ್ರಿ ಆಚರಣೆಗೆ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ರಾಜಾಂಗಣದಲ್ಲಿ ಚಾಲನೆ ನೀಡಿ, ಶಿವನ ಆರಾಧನೆಯಿಂದ ಕೃಷ್ಣ ಪ್ರೀತಿ ಸಾಧ್ಯ ಎಂದರು.
ಬಳಿಕ ವಿದ್ವಾನ್ ಲಕ್ಷ್ಮೀಶ ಮುದರಂಗಡಿ ಅವರಿಂದ ಉಪನ್ಯಾಸ, ಕ್ಷಿತಿಜ ಕಾಸರವಳ್ಳಿ ಬಳಗ ಬೆಂಗಳೂರು ಅವರಿಂದ ಭರತನಾಟ್ಯ, ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರಿಂದ ಉಪನ್ಯಾಸ, ರುದ್ರಪಾರಾಯಣ ಮತ್ತು ವಿಷ್ಣುಸಹಸ್ರನಾಮ ಪಾರಾಯಣ, ಮಧೂರು ಬಾಲಸುಬ್ರಹ್ಮಣ್ಯಂ ಬಳಗದವರಿಂದ ಭಜನೆ, ಮರ್ಣೆ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.
ಶ್ರೀಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರ್, ವಿಷ್ಣಪ್ರಸಾದ್ ಪಾಡಿಗಾರು, ಜಯರಾಮ ಆಚಾರ್ಯ ಬೈಲೂರು, ವಿದ್ವಾಂಸ ಆನಂದತೀರ್ಥ ಆಚಾರ್ಯ ಸಗ್ರಿ ಮೊದಲಾದವರಿದ್ದರು. ಶ್ರೀಗಳಿಂದ ವಿಶೇಷ ಪೂಜೆ ನಡೆಯಿತು.