ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ಉದಯ ಶಂಕರ್ ಅಧ್ಯಕ್ಷ, ರಾಮ ಬಿಜೂರು ಪ್ರಧಾನ ಕಾರ್ಯದರ್ಶಿ

ಲೋಕಬಂಧು ನ್ಯೂಸ್, ಬೈಂದೂರು
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೈಂದೂರು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ 'ದೂರದರ್ಶನ ಚಂದನ'ದ ಉದಯ ಶಂಕರ್ ಪಡಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ 'ವಿಜಯ ಕರ್ನಾಟಕ'ದ ರಾಮ ಬಿಜೂರು ಆಯ್ಕೆಯಾಗಿದ್ದಾರೆ.ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ  ಅಸ್ಟ್ರೋ ಮೋಹನ್ ಅಧ್ಯಕ್ಷತೆಯಲ್ಲಿ ಶನಿವಾರ ಚುನಾವಣೆ ನಡೆಯಿತು.


ಉಪಾಧ್ಯಕ್ಷರಾಗಿ 'ವಿಜಯವಾಣಿ'ಯ ನರಸಿಂಹ ನಾಯಕ್, ಕೋಶಾಧಿಕಾರಿಯಾಗಿ 'ಉದಯವಾಣಿ'ಯ ಕೃಷ್ಣ ಬಿಜೂರು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ 'ವಿಫೋರ್ ನ್ಯೂಸ್‌'ನ ಜಯಪ್ರಕಾಶ್ ವಿ. ಆಯ್ಕೆಯಾದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಇದ್ದರು.