ಲೋಕಬಂಧು ನ್ಯೂಸ್, ಉಡುಪಿ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನೀಡುವ ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿನಿಧಿ ಪ್ರಾಯೋಜಿತ 2026ನೇ ಸಾಲಿನ 'ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.ಗೀತಾ ಸುರತ್ಕಲ್ (ರಂಗ ನಟಿ), ಶ್ರೀಪತಿ ಮಂಜನಬೈಲು ಬೆಂಗಳೂರು (ರಂಗ ನಟ- ನಿರ್ದೇಶಕ) ಎಸ್.ನಿತ್ಯಾನಂದ ಪೈ ಕಾರ್ಕಳ (ರಂಗ ಸಂಘಟನೆ), ಅವಿನಾಶ್ ಕಾಮತ್ ಮುಂಬೈ (ರಂಗ ನಟ) ಬಿ.ಎಸ್. ರಾಮ ಶೆಟ್ಟಿ ಹಾರಾಡಿ (ರಂಗ ನಿರ್ದೇಶಕ) ಅವರಿಗೆ ಮಾ.26ರಂದು ನಡೆಯುವ ವಿಶ್ವ ರಂಗಭೂಮಿ ದಿನಾಚರಣೆ ಸಂದರ್ಭದಲ್ಲಿ ನಗದು, ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ 'ಮಲಬಾರ್ ವಿಶ್ವರಂಗ ಪುರಸ್ಕಾರ' ಪ್ರದಾನ ಮಾಡಲಾಗುವುದು ಎಂದು ಸಮಿತಿ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ತಿಳಿಸಿದ್ದಾರೆ.