ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.21ರಂದು ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಶನಿವಾರ ಆಗಮಿಸಿ, ಪ್ರಸಾದ ಸ್ವೀಕರಿಸಿದರು.ಗೋಧಾಮ ಪ್ರವರ್ತಕ ಡಾ.ಜಿ.ರಾಮಕೃಷ್ಣ ಆಚಾರ್ ಅವರು ಹೆಗ್ಡೆ ಅವರನ್ನು ಬರಮಾಡಿಕೊಂಡರು.ಬಿಜೆಪಿ ನಾಯಕ ಕೆ.ಪಿ.ಜಗದೀಶ ಅಧಿಕಾರಿ ಜೊತೆಗಿದ್ದರು.
ನಾಗಮಂಡಲ ಮೂಲಕ ಕೃಷಿಪೂರಕ ಕಾರ್ಯಕ್ರಮ ಆಯೋಜಿಸುತ್ತಿರುವ ಡಾ.ಆಚಾರ್ ಕಾರ್ಯವನ್ನು ನ್ಯಾ.ಹೆಗ್ಡೆ ಮೆಚ್ಚುಗೆ ವ್ಯಕ್ತಪಡಿಸಿದರು.