ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ನಾಗರಾಜ ರಾಯಪ್ಪನಮಠ ಅಧ್ಯಕ್ಷ, ಗಣೇಶ ಬೀಜಾಡಿ ಪ್ರಧಾನ ಕಾರ್ಯದರ್ಶಿ

ಲೋಕಬಂಧು ನ್ಯೂಸ್, ಕುಂದಾಪುರ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಾಪುರ ತಾಲೂಕು ಘಟಕದ 2025-28ನೇ ಸಾಲಿನ ಅಧ್ಯಕ್ಷರಾಗಿ 'ಯು ಚಾನೆಲ್‌'ನ ನಾಗರಾಜ ರಾಯಪ್ಪನಮಠ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ 'ವಿಜಯ ಕರ್ನಾಟಕ'ದ ಗಣೇಶ್ ಬೀಜಾಡಿ
ಆಯ್ಕೆಯಾಗಿದ್ದಾರೆ.ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಅಧ್ಯಕ್ಷತೆಯಲ್ಲಿ ಶನಿವಾರ ಚುನಾವಣೆ ನಡೆಯಿತು.


ಉಪಾಧ್ಯಕ್ಷರಾಗಿ 'ಉದಯವಾಣಿ'ಯ ಸತೀಶ್ ಆಚಾರ್ ಮತ್ತು 'ಕುಂದಪ್ರಭ'ದ ಸಂತೋಷ್ ಕುಂದೇಶ್ವರ, ಕೋಶಾಧಿಕಾರಿಯಾಗಿ 'ಕನ್ನಡಪ್ರಭ'ದ ಶ್ರೀಕಾಂತ ಹೆಮ್ಮಾಡಿ, ಕಾರ್ಯದರ್ಶಿಗಳಾಗಿ 'ವಿಜಯವಾಣಿ'ಯ ಮಂಜುನಾಥ ಶೆಣೈ ಜನ್ನಾಡಿ ಮತ್ತು 'ದಾಯ್ಜಿ ವರ್ಲ್ಡ್'ನ ರಾಘವೇಂದ್ರ ಬಿ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಶಾಂತ್ ಪಾದೆ, ನಾಗರಾಜ ವಂಡ್ಸೆ, ಶ್ರೀಕರ್ ಎಸ್., ಸತೀಶ್ ಎಂ.ಬಿ., ವಿನಯ ಪಾಯಸ್, ಎಂ.ನಿತ್ಯಾನಂದ, ಸಂತೋಷ್ ಶೆಟ್ಟಿ, ಜಗದೀಶ್ ಆಯ್ಕೆಯಾದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರ ಚಾಲುಕ್ಯ ಮತ್ತು ಯೋಗೀಶ್ ಕುಂಭಾಶಿ ಇದ್ದರು.