ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಶನಿವಾರ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ಅಂಗವಾಗಿ ಮಹಾಅನ್ನದಾನಕ್ಕೂ ಮುನ್ನ ಪಲ್ಲಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ನಾಗಮಂಡಲೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ಆಶ್ಲೇಷಾ ಬಲಿದಾನ, ಪಂಚವಿಶಂತಿ ದ್ರವ್ಯಮಿಳಿತ ಕಲಶ, ಪ್ರಧಾನ ಯಾಗ, ಸರ್ಪತ್ರಯ ಮಂತ್ರ ಯಾಗ, ಪವಮಾನ ಸೂಕ್ತ ಯಾಗ, ತಿಲ ಯಾಗ, ಬ್ರಹ್ಮಚಾರಿ ಆರಾಧನಾ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನಾರಾಧನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಶ್ರೀ ಭವಾನಿ ಭೋಜನಾಲಯದಲ್ಲಿ ಮಹಾಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ದುರ್ಗಾ ನಮಸ್ಕಾರ ಪೂಜೆ
ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತ್ರತ್ವದಲ್ಲಿ ವಾಸುದೇವ ಭಟ್ ಸಹಯೋಗದಲ್ಲಿ ನಡೆಯಿತು.
ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್. ಆಚಾರ್, ಅನುಷಾ ಆಚಾರ್, ಪ್ರಜ್ವಲ್ ಆಚಾರ್, ಪೂಜಾ ಆಚಾರ್, ತೇಜಸ್ ಆಚಾರ್, ರಕ್ಷತ್ ಆಚಾರ್ ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ದಾಮೋದರ ಶರ್ಮ ಬಾರ್ಕೂರು, ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಗಣ್ಯರು ಮೊದಲಾದವರಿದ್ದರು.
ಗಣ್ಯರ ಭೇಟಿ
ಶಾಸಕ ಸುನಿಲ್ ಕುಮಾರ್, ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೊಗೀಶ್ ಶೆಟ್ಟಿ ಕಾಪು ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಇತರ ಕಡೆಗಳ ಗಣ್ಯರು, ಭಕ್ತರು ಶ್ರೀಮನ್ನಾಗಮಂಡಲದಲ್ಲಿ ಭಾಗವಹಿಸಿದ್ದರು.
ಅನೇಕ ಮಂದಿ ಮಹಾಅನ್ನದಾನ ಪ್ರಸಾದ ಸ್ವೀಕರಿಸಿದರು.