ಮುನಿಯಾಲು ನಾಗಮಂಡಲೋತ್ಸವಕ್ಕೆ ಚಾಲನೆ

ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ. 21ರ ವರೆಗೆ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಯಿತು.ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್‌ ಕೊರಂಗ್ರಪಾಡಿ ಕುಮಾರಗುರು ತಂತ್ರಿ ಸಹಿತ ಋತ್ವಿಜರನ್ನು ಸ್ವಾಗತಿಸಿದರು. 6 ಕಾಯಿ ಗಣಯಾಗ, ಉಗ್ರಾಣ ಮುಹೂರ್ತ, ಅನ್ನಾರಾಧನ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ವಿದ್ವಾನ್‌ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ವಾಸುದೇವ ಭಟ್‌ ಸಹಯೋಗದೊಂದಿಗೆ ನಡೆಯಿತು.


ಮುನಿಯಾಲು ಸಂಜೀವಿನಿ ಗೋಧಾಮ ಸಂಸ್ಥಾಪಕ ಡಾ.ಜಿ ರಾಮಕೃಷ್ಣ ಆಚಾರ್, ಸವಿತಾ ಆರ್‌. ಆಚಾರ್‌, ಅನುಷಾ ಆಚಾರ್‌, ಪ್ರಜ್ವಲ್‌ ಆಚಾರ್‌, ಪೂಜಾ ಆಚಾರ್‌, ತೇಜಸ್‌ ಆಚಾರ್‌, ರಕ್ಷತ್‌ ಆಚಾರ್‌ ಹಾಗೂ ಕುಟುಂಬಿಕರು, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ದಾಮೋದರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಅಮೀನ್‌, ಜ್ಯೋತಿ ಹರೀಶ್‌, ನಾಗಪ್ಪಯ್ಯ ಆಚಾರ್ಯ ಗುಜ್ಜಾಡಿ, ಪ್ರಮುಖರಾದ ಡಾ. ಹರೀಶ ಆಚಾರ್ಯ ಜಲಕದಕಟ್ಟೆ ಮಂಗಳೂರು, ಉಪೇಂದ್ರ ಆಚಾರ್ಯ ಪೆರ್ಡೂರು, ಡಾ.ಕೆ. ಸುದರ್ಶನ್‌ ಹೆಬ್ಬಾರ್‌ ಮುನಿಯಾಲು, ಗೋಪಿನಾಥ ಭಟ್‌ ಮುನಿಯಾಲು, ಬೆಳುವಾಯಿ ಸೀತಾರಾಮ ಆಚಾರ್ಯ, ಸಮಿತಿ ಸದಸ್ಯರು ಭಾಗವಹಿಸಿದ್ದರು.