ಮಸ್ಕತ್- ಮಂಗಳೂರು ನೇರ ವಿಮಾನ ಸೇವೆ ಪುನರಾರಂಭಿಸಿ

ಲೋಕಬಂಧು ನ್ಯೂಸ್, ಉಡುಪಿ
ಮಸ್ಕತ್ ಮತ್ತು ಮಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಪುನರಾರಂಭಿಸುವ ಕುರಿತು ಉಡುಪಿ- ಚಿಕ್ಕಮಗಳೂರು ಲೋಕಸಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಕಿಂಜರಾಪು ಅವರಿಗೆ ಪತ್ರ ಬರೆದು ಆಗ್ರಹಿಸಿದ್ದು, ಪತ್ರಕ್ಕೆ ಉತ್ತರಿಸಿದ ಕೇಂದ್ರ ಸಚಿವ ನಾಯ್ಡು, ಏರ್ ಇಂಡಿಯಾ ಸಂಸ್ಥೆ ಈ ವರ್ಷದ ಮಾರ್ಚ್‌ನಿಂದ ಮಸ್ಕತ್ ಮತ್ತು ಮಂಗಳೂರು ಮಾರ್ಗದಲ್ಲಿ ವಿಮಾನ ಯಾನ ಸಂಚಾರ ಪುನರಾರಂಭಿಸುವ ನಿರ್ಣಯವನ್ನು ಈಗಾಗಲೇ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಸಂಸದ ಕೋಟ ಅವರ ಪ್ರಯತ್ನವನ್ನು ಶ್ಲಾಘಿಸಿದ ಪ್ರಯಾಣಿಕ ಸಂಘಟನೆಯವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.