ಲೋಕಬಂಧು ನ್ಯೂಸ್, ಕಾಪು
ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್'ನಲ್ಲಿ ಬಂದ ಮೂರು ಮಂದಿ ಯುವಕರ ತಂಡವೊಂದು ವೃದ್ದೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಶಂಕರಪುರದಲ್ಲಿ ನಡೆದಿದ್ದು, ಹೆಲೆನ್ ಡಿ'ಸೋಜ (70) ಸರ ಕಳೆದುಕೊಂಡ ವೃದ್ಧೆ.ಬೆಳಗ್ಗೆ 10 ಗಂಟೆ ವೇಳೆಗೆ ಆಕೆ ಮನೆಯಲ್ಲಿರುವಾಗ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಯುವಕರ ತಂಡ ಅಕ್ಕಪಕ್ಕದ ಮನೆಯವರ ಬಗ್ಗೆ ವಿಚಾರಿಸಿದರು.
ಬಳಿಕ ಮಹಿಳೆಯ ಮೊಬೈಲ್ ನಂಬರ್ ಕೇಳಿ ಬರೆಯುತ್ತಿದ್ದಂತೆ ಒಬ್ಬಾತ ಮಹಿಳೆಯ ಕೊರಳಲ್ಲಿದ್ದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಕಸಿದು ಮನೆಯ ಕಂಪೌಂಡ್ ಹಾರಿದ. ಉಳಿದ ಇಬ್ಬರು ಆತನೊಂದಿಗೆ ಸೇರಿ ಬೈಕ್'ನಲ್ಲಿ ಪರಾರಿಯಾದರು.
ಶಿರ್ವ ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಿಸಿ ಫೂಟೇಜ್ ಲಭ್ಯವಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.