ಕಾಲಟಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಭೇಟಿ

ಲೋಕಬಂಧು ನ್ಯೂಸ್, ತ್ರಿಶೂರ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜನ್ಮಭೂಮಿ ಕ್ಷೇತ್ರ ಕೇರಳದ ಕಾಲಟಿಗೆ ಭೇಟಿ ನೀಡಿದರು.ಅಲ್ಲಿನ ಶೃಂಗೇರಿ ಶಂಕರ ಮಠಕ್ಕೆ ಭೇಟಿ ನೀಡಿ ಜಗನ್ಮಾತೆ ಶ್ರೀ ಶಾರದಾಂಬೆ ಮತ್ತು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ದರ್ಶನ ಪಡೆದರು.ಬಳಿಕ ಗುರುಪಾದುಕೆಗಳಿಗೆ ಪೂಜೆ ಸಲ್ಲಿಸಿ ಕೇರಳದ ತನ್ನ ಮೊದಲ ಯಾತ್ರೆ ಆರಂಭಿಸಿದರು.