ಲೋಕಬಂಧು ನ್ಯೂಸ್, ಹುಬ್ಬಳ್ಳಿ
ಗದಗ ಜಿಲ್ಲೆಯ ಬೆಳ್ಳಟ್ಟಿ ನಿವಾಸಿ, `ಸಂಯುಕ್ತ ಕರ್ನಾಟಕ' ಪತ್ರಿಕಾ ವಿತರಕ ಹಾಗೂ ಕಿರಾಣಿ ಅಂಗಡಿ ಮಾಲಕ ಬಾಲಚಂದ್ರ ಮಂಜನಬೈಲು (65) ಹೃದಯಾಘಾತದಿಂದ ಫೆಬ್ರವರಿ 2ರಂದು ಸೋಮವಾರ ನಿಧನರಾದರು. ಅವರಿಗೆ ಪತ್ನಿ ಇದ್ದಾರೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಮಂಜನಬೈಲಿನವರಾದ ಬಾಲಚಂದ್ರ ಅವರು ಕಳೆದ ಅನೇಕ ವರ್ಷಗಳಿಂದ ಬೆಳ್ಳಟ್ಟಿಯಲ್ಲಿದ್ದರು. ಸರಳ ಸಜ್ಜನ ವ್ಯಕ್ತಿತ್ವದ ಸ್ನೇಹಮಯಿಯಾಗಿದ್ದ ಅವರು ಜನಾನುರಾಗಿಯಾಗಿದ್ದರು. ಕುಟುಂಬದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಮೃತರು ಈರ್ವರು ಸಹೋದರರು, ಮೂವರು ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಳ್ಳಟ್ಟಿ ರುದ್ರಭೂಮಿಯಲ್ಲಿ ನಡೆಯಿತು.
