ಲೋಕಬಂಧು ನ್ಯೂಸ್, ಉಡುಪಿ
ಕಾರ್ಕಳದ ಹಿಂದೂ ವಿವಾಹಿತೆ ಮತ್ತು ಮುಸ್ಲಿಂ ಯುವಕನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯವಾಗಿ ಬರೆದು ಧರ್ಮ-ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವ ಪೋಸ್ಟ್ ಮಾಡಿರುವ ಆರೋಪದಲ್ಲಿ ಮಣಿಪಾಲ ಪೊಲೀಸರು ಈರ್ವರನ್ನು ಬಂಧಿಸಿದ್ದಾರೆ.
2025ರ ಮೇ 16ರಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಮೆಟಾಡಾಟಾ ಮೂಲಕ ಇನ್ಸ್ಟಾಗ್ರಾಮ್'ನಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಬಂಟ್ವಾಳದ ನಿತೇಶ್ ಕೆ. (20) ಎಂಬಾತನನ್ನು ಜನವರಿ 30ರಂದು ಪುತ್ತೂರಿನಲ್ಲಿ ಹಾಗೂ ಕಡಬ ಸಿರಿಬಾಗಿಲು ಹಿತೇಶ್ ಎ. (19) ಎಂಬಾತನನ್ನು ಫೆಬ್ರವರಿ 1ರಂದು ಮಂಗಳೂರು ಲಾಲ್‌ಬಾಗ್‌ನಲ್ಲಿ ದಸ್ತಗರಿ ಮಾಡಿದ್ದಾರೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರೋಪಿಗಳಿಂದ ಮೊಬೈಲ್‌ಗಳನ್ನು ಸ್ವಾಧೀನಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
