ಲೋಕಬಂಧು ನ್ಯೂಸ್, ಉಡುಪಿ
ಕಳೆದ ಜನವರಿ 18ರಂದು ನಡೆದ ಶೀರೂರು ಮಠದ ಪರ್ಯಾಯ ಮಹೋತ್ಸವದಲ್ಲಿ ಸಹಕರಿಸಿದ ಆರಕ್ಷಕರಿಗೆ ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಫೆಬ್ರವರಿ 4ರಂದು ಬುಧವಾರ ಅಭಿನಂದಿಸಿ ಹರಸಿದರು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲೆಯ ಸರ್ಕಲ್ ಇನ್ಸ್‌ಪೆಕ್ಟರ್'ಗಳು, ಸಬ್ ಇನ್ಸ್‌ಪೆಕ್ಟರ್'ಗಳು ಹಾಗೂ ಕರ್ತವ್ಯ ನಿರ್ವಹಿಸಿದ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಶಾಲು ಹೊದಿಸಿ, ಫಲ-ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎಎಸ್.ಪಿ. ಸುಧಾಕರ ನಾಯ್ಕ್, ಡಿವೈಎಸ್.ಪಿ.ಗಳಾದ ಪ್ರಭು ಡಿ.ಟಿ. ಮತ್ತು ತಿಮ್ಮಪ್ಪ ಗೌಡ, ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ, ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಮೋಹನ ಭಟ್ ಮತ್ತು ಮಧುಕರ ಮುದ್ರಾಡಿ ಉಪಸ್ಥಿತರಿದ್ದರು.
