ಲೋಕಬಂಧು ನ್ಯೂಸ್, ಮಂಗಳೂರು
ಬಜಿಲಕೇರಿ ದಿ.ಕೃಷ್ಣಪ್ಪ ಗಟ್ಟಿ ಪತ್ನಿ ಹಾಗೂ ಮಾಧ್ಯಮ ಕ್ಷೇತ್ರದ ಪದ್ಮನಾಭ ಗಟ್ಟಿ ಮಾತೃಶ್ರೀಯವರಾದ ಗಿರಿಜಾ ಗಟ್ಟಿ (ಲಕ್ಷ್ಮಿ), ಬಜಿಲಕೇರಿ ಜ.31ರಂದು ಶನಿವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅಶೋಕನಗರದ ಸ್ವಗೃಹದಲ್ಲಿ ಅಪರಾಹ್ನ 2 ಗಂಟೆ ವರೆಗೆ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಬಳಿಕ ಕಾಸರಗೋಡು ತರವಾಡು ಕಲ್ಲಣಮಗಡಿ ಹೊಸಮನೆ ಚೌಕಿಯ ಮೂಲಮನೆಯಲ್ಲಿ ಸಂಜೆ ಅಂತ್ಯಸಂಸ್ಕಾರ ನಡೆಸಲಾಯಿತು.
