ಲೋಕಬಂಧು ನ್ಯೂಸ್, ಉಡುಪಿ
ಹೃದಯ ಚಿಕಿತ್ಸೆಗೊಳಗಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಆರೋಗ್ಯ ಸುಧಾರಿಸಿ ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಜನಸೇವೆಯಲ್ಲಿ ತೊಡಗುವಂತಾಗಲಿ ಎಂದು ಹಾರೈಸಿ ಇಲ್ಲಿನ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜೆಗೋಳಿ, ಕಾಂಗ್ರೆಸ್ ಮುಖಂಡರಾದ ಎಂ. ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಪುತ್ರನ್, ದಿನಕರ ಹೇರೂರು, ಜ್ಯೋತಿ ಹೆಬ್ಬಾರ್, ವಿಶ್ವಾಸ್ ಅಮೀನ್, ಮಹಾಬಲ ಕುಂದರ್, ಅಣ್ಣಯ್ಯ ಶೇರಿಗಾರ್, ಮಾಧವ ಬನ್ನಂಜೆ, ಹರೀಶ್ ಕಿಣಿ, ದಿವಾಕರ ಕುಂದರ್, ಇಚ್ಛಿತಾರ್ಥ ಶೆಟ್ಟಿ, ನವೀನ್ ಸಾಲಿಯಾನ್, ರವಿ ಶೆಟ್ಟಿ, ಯತೀಶ್ ಕರ್ಕೇರ, ಸದಾಶಿವ ಕಟ್ಟೆಗುಡ್ಡೆ, ರಾಘವೇಂದ್ರ ಶೆಟ್ಟಿ, ನವೀನ್ ಮರಕಾಲ, ಪ್ರಶಾಂತ್ ಮಾಯಾಡಿ, ಉದಯ ಆಚಾರ್ಯ, ಶಬರೀಶ ಸುವರ್ಣ, ಮೀನಾಕ್ಷಿ ಮಾಧವ ಬನ್ನಂಜೆ, ಪುಷ್ಪ ಅಂಚನ್ ಮೊದಲಾದವರಿದ್ದರು.