ಎಲ್ಐಸಿ ಮಹಿಳೆಯರ ಸಮಾವೇಶ

ಲೋಕಬಂಧು ನ್ಯೂಸ್, ಉಡುಪಿ
ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟ ಹೈದರಾಬಾದ್ ವತಿಯಿಂದ ವಿಮಾ ನೌಕರರ ಸಂಘ ಉಡುಪಿ ನೇತೃತ್ವದಲ್ಲಿ ನಗರದ ಲಿಕೊ ಬ್ಯಾಂಕ್‌ನ ವಜ್ರ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ 5ನೇ ರಾಜ್ಯ ಮಟ್ಟದ ಎಲ್ಐಸಿ ದುಡಿಯುವ ಮಹಿಳೆಯರ ಸಮಾವೇಶ ನಡೆಯಿತು.ಲೇಖಕಿ ವಿನಯಾ ಒಕ್ಕುಂದ ಮಾತನಾಡಿ, ಶಿಕ್ಷಣ ಮತ್ತು ವೈಚಾರಿಕತೆಯ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಶಿಕ್ಷಣ ಪಡೆದವರೆಲ್ಲಾ ವಿಚಾರ ಮಾಡುವ ಶಕ್ತಿ ಪಡೆಯಬೇಕೆಂದಿಲ್ಲ. ಹೆಣ್ಣಾಗಿ ಜಗತ್ತನ್ನು ನೋಡುವ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತಿರುವುದು ಮನುಕುಲದ ದುರಂತ ಎಂದರು.


ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ಎನ್. ರವೀಂದ್ರನಾಥ್, ಉಪಾಧ್ಯಕ್ಷ ಎಂ.ರವಿ, ಜೊತೆ ಕಾರ್ಯದರ್ಶಿ ಕೆ.ಗೋಪಾಲ್, ಸಂಚಾಲಕಿ ಎಚ್.ಆರ್. ಗಾಯತ್ರಿ, ಎ.ಎಂ. ಬಲ್ಲಾಳ್, ಸಿಐಟಿಯು ಮುಖಂಡ ಸುರೇಶ್ ಕಲ್ಲಾಗರ, ಗಣಪತಿ ಎನ್. ಭಟ್ ಉಪಸ್ಥಿತರಿದ್ದರು.


ಒಕ್ಕೂಟದ ಅಧ್ಯಕ್ಷ ಪಿ.ಸತೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.