ಲೋಕಬಂಧು ನ್ಯೂಸ್, ಉಡುಪಿ
ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಾಧಿಪತಿ, ಶ್ರೀನಿವಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಖ್ಯಾತ ಲೆಕ್ಕಪರಿಶೋಧಕರಾಗಿದ್ದ ರಾಘವೇಂದ್ರ ರಾವ್ ನಿಧನಕ್ಕೆ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.
ಅವರು ತಮ್ಮ ಶೋಕ ಸಂದೇಶದಲ್ಲಿ `ರಾಘವೇಂದ್ರ ರಾಯರ ನಿಧನ ವಾರ್ತೆ ತಿಳಿದು ಖೇದವಾಯಿತು. ಸಾತ್ವಿಕರೂ ದಾನಿಗಳೂ ಆಗಿದ್ದ ಅವರು ಪುತ್ತಿಗೆ ಮಠದ ಅಭಿಮಾನಿಯಾಗಿದ್ದರು. ಪುತ್ತಿಗೆ ಶ್ರೀಮಠ ಹಾಗೂ ಕೃಷ್ಣಮಠದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದರು.
ನಮ್ಮ ಚತುರ್ಥ ವಿಶ್ವ ಗೀತಾ ಪರ್ಯಾಯದಲ್ಲಿ ಅವರನ್ನು ಶ್ರೀಕೃಷ್ಣಗೀತಾನುಗ್ರಹ ಪ್ರಶಸ್ತಿಯೊಂದಿಗೆ ಗೌರವಿಸಲಾಗಿತ್ತು.
ನಮಗೆ ಪ್ರೀತಿಪಾತ್ರರೂ ಅಭಿಮಾನಿಗಳೂ ಆಗಿದ್ದ ರಾಘವೇಂದ್ರ ರಾಯರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುತ್ತೇವೆ' ಎಂದು ತಿಳಿಸಿದ್ದಾರೆ.
