ಲೋಕಬಂಧು ನ್ಯೂಸ್, ಉಡುಪಿ
ಪ್ರೇಮಿಗಳ ದಿನದಂದು ದೇಶಪ್ರೇಮಿ ವೀರ ಯೋಧರನ್ನು ಗೌರವಿಸಬೇಕೇ ಹೊರತು ಕೆಂಪು ಗುಲಾಬಿಯನ್ನಲ್ಲ ಎಂದು ಶ್ರೀರಾಮ ಸೇನೆ ಪ್ರೇಮಿಗಳಿಗೆ ಕಿವಿಮಾತು ಹೇಳಿದೆ.ಪ್ರತೀ ವರ್ಷ ಫೆಬ್ರವರಿ 14ರಂದು ಭಾರತೀಯರು ಮರೆಯಲಾಗದ ದಿನ. 2019ರ ಫೆ.14ರಂದು ಜಮ್ಮು- ಶ್ರೀನಗರದಲ್ಲಿ 40 ಮಂದಿ ಭಾರತೀಯ ವೀರ ಯೋಧರು ಹುತಾತ್ಮರಾದರು. ಆ ನೋವು ಇನ್ನೂ ನಮ್ಮ ಹೃದಯದಲ್ಲಿದೆ.
ದೇಶಕ್ಕಾಗಿ ಹುತಾತ್ಮರಾದ ನಮ್ಮ ಭಾರತಾಂಬೆಯ ಪುತ್ರರನ್ನು ಗೌರವಿಸಬೇಕೇ ಹೊರತು ಗುಲಾಬಿ ಹೂವನ್ನಲ್ಲ.
ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರೇಮಿಗಳ ದಿನಾಚರಣೆ (ಫೆ.14)ಯನ್ನು ಯಾರೂ ಆಚರಿಸಬೇಡಿ. ಆ ದಿನ ನಮ್ಮ ಹುತಾತ್ಮರಾದ ನಮ್ಮ ಯೋಧರಿಗಾಗಿ ಪ್ರಾರ್ಥಿಸೋಣ. ಪ್ರೇಮಿಗಳು ಪಾರ್ಕ್, ಮಾಲ್, ಪ್ರೇಕ್ಷಣೀಯ ಸ್ಥಳಗಳು ಮೊದಲಾದೆಡೆಗಳಲ್ಲಿ ಅಸಭ್ಯವಾಗಿ ಕಂಡುಬಂದಲ್ಲಿ ಅದನ್ನು ಶ್ರೀರಾಮಸೇನೆ ಗಂಭೀರವಾಗಿ ಪರಿಗಣಿಸಿ, ಅಂಥವರಿಗೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಬಗ್ಗೆ ಮಾಹಿತಿ ನೀಡಲಾಗುವುದು. ಜೊತೆಗೆ ಸ್ಥಳೀಯ ಆರಕ್ಷಕ ಠಾಣೆ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮತ್ತು ಪ್ರೇಮಿಗಳ ಹೆತ್ತವರಿಗೆ ಮಾಹಿತಿ ನೀಡಲಾಗುವುದು ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ಎಚ್ಚರಿಕೆ ನೀಡಿದ್ದಾರೆ.