ಶ್ರೀಕೃಷ್ಣ ದರ್ಶನಕ್ಕೆ ನೂತನ ಪಥ

ಲೋಕಬಂಧು ನ್ಯೂಸ್ | ಉಡುಪಿ, ಮಾ.30
ಶ್ರೀಕೃಷ್ಣ ದೇವರ ದರ್ಶನಕ್ಕೆ ತೆರಳುವ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಪ್ರತಿಯೊಬ್ಬ ಭಕ್ತರಿಗೂ ದೇವರ ದರ್ಶನವಾಗಬೇಕೆನ್ನುವ ನಿಟ್ಟಿನಲ್ಲಿ ನೂತನ ಪಥಕ್ಕೆ ತಯಾರಿ ಮಾಡಲಾಗಿದೆ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.
ಶ್ರೀಕೃಷ್ಣನ ದರ್ಶನವನ್ನು ಕನಕನ ಕಿಂಡಿಯಲ್ಲಿ ಮಾಡಿಕೊಂಡು ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ, ಶ್ರೀ ಮಧ್ವಾಚಾರ್ಯರು ಅದೃಶ್ಯರಾದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸಿ ನವಗ್ರಹ ಕಿಂಡಿಯಲ್ಲಿ ಭಗವಂತನ ದರ್ಶನ ಮಾಡಿ ತೆರಳುವಂತೆ ಮಾರ್ಗ ಮಾಡಲಾಗುತ್ತದೆ.


ದೇವಳಕ್ಕೆ ತೆರಳುವ ಮಾರ್ಗದಲ್ಲಿ ಸೇವಾ ಕೌಂಟರ್, ಮಾಹಿತಿ ಕೌಂಟರ್'ಗಳನ್ನು ತೆರೆಯಲಾಗುತ್ತದೆ ಎಂದು ಡಾ.ಸರಳತ್ತಾಯ ತಿಳಿಸಿದ್ದಾರೆ.