ಭಟ್ ಆರೋಪಕ್ಕೆ ಶಾಸಕ ಯಶಪಾಲ್ ಸ್ಪಷ್ಟನೆ

ಲೋಕಬಂಧು‌ ನ್ಯೂಸ್, ಉಡುಪಿ, ಮಾ.22
ಮಾಜಿ ಶಾಸಕ ರಘುಪತಿ ಭಟ್ ಆರೋಪಗಳಿಗೆ ಶಾಸಕ ಯಶಪಾಲ್ ಸುವರ್ಣ ಸುವರ್ಣ ‌ಸ್ಪಷ್ಟನೆ ನೀಡಿದ್ದಾರೆ.ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದ ಸರ್ವೇ ನಂಬರ್ 118/201ಎ3 ಮತ್ತು 118/2ಬಿಯ 0.90 ಎಕರೆ ಜಾಗದ ಏಕವಿನ್ಯಾಸ ನೀಡುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲದ ಸದಸ್ಯರು ಹಾಗೂ ಸ್ಥಳೀಯ ಮೀನುಗಾರರು ಆಕ್ಷೇಪ ಮಾಡಿ, ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ ದೂರು ನೀಡಿದ್ದಾರೆ. ಈ ಹಿಂದೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಕಮಿಷನ‌ರ್ ಮಹೇಶ್ಚಂದ್ರ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಾಗಿದ್ದಾರೆ.


ಈ ಕಡತಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಾವಳಿ ಯುವಕ ಮಂಡಲದ ಸದಸ್ಯರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ತನಿಖೆಯ ಹಂತದಲ್ಲಿದೆ ಹಾಗೂ ಉಚ್ಚ ನ್ಯಾಯಾಲಯದಲ್ಲೂ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಾಗಿದೆ. ಜವಾಬ್ದಾರಿಯುತ ಶಾಸಕನಾಗಿ ಸ್ಥಳೀಯ ಯುವಕ ಮಂಡಲ ಹಾಗೂ ಸ್ಥಳೀಯ ಮೀನುಗಾರರ ಮನವಿಯ ಮೇರೆಗೆ ಈ ಕಡತದ ಬಗ್ಗೆ ನಿಯಮಾವಳಿಗೆ ಬದ್ಧವಾಗಿ ಕ್ರಮ ಕೈಗೊಂಡು ವರದಿ ನೀಡುವಂತೆ ಸಾರ್ವಜನಿಕರ ಪರವಾಗಿ ಪತ್ರ ಬರೆದಿದ್ದೇನೆ.


ಈ ವಿಚಾರದಲ್ಲಿ ನನಗೆ ಯಾವುದೇ ಸ್ವಹಿತಾಸಕ್ತಿಯಾಗಲಿ ಅಥವಾ ದುರುದ್ದೇಶ ಇಲ್ಲ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.