ಲೋಕಬಂಧು ನ್ಯೂಸ್ | ಮೂಡುಬಿದಿರೆ, ಮಾ.30
ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆದ ಶ್ರೀರಾಮ ನವಮಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವದಂದು ಮಾ.28 ಶನಿವಾರ ಶ್ರೀದೇವರಿಗೆ ಪಟ್ಟಾಭಿರಾಮ ಅಲಂಕಾರ ಮಾಡಲಾಗಿತ್ತು.
ಮಾ.27ರಂದು ಶ್ರೀರಾಮ ನವಮಿಯಂದು ಮಧ್ಯಾಹ್ನ 12.06 ಗಂಟೆಗೆ ಶ್ರೀರಾಮ ಜನ್ಮೋತ್ಸವ, ರಾತ್ರಿ ಪುಷ್ಪರಥೋತ್ಸವ ಹಾಗೂ 28ರಂದು ಬ್ರಹ್ಮರಥೋತ್ಸವ ನಡೆಯಿತು.
