ದೇವರ ಸಾಮೀಪ್ಯ ಅನುಭವಿಸಲು 'ತಪಸ್ಸು ಕಾಲ' ಕ್ರೈಸ್ತರಿಗೆ ಮಾರ್ಗದರ್ಶಿ

ಲೋಕಬಂಧು ನ್ಯೂಸ್ ಉಡುಪಿ, ಮಾ.30
ಪ್ರಾರ್ಥನೆ, ಉಪವಾಸ, ದಾನ- ಧರ್ಮದ ಮೂಲಕ ದೇವರ ಸಾಮೀಪ್ಯ ಅನುಭವಿಸಲು 'ತಪಸ್ಸು ಕಾಲ' ಕ್ರೈಸ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಮಲ್ಪೆ ಯುಬಿಎಂ ಎಬನೇಜರ್ ಚರ್ಚಿನಲ್ಲಿ 'ಹೊಸಾನ್ನಾದಿಂದ ಶಿಲುಬೆಯ ವರೆಗೆ' ಧ್ಯೇಯವಾಕ್ಯದೊಂದಿಗೆ ಭಾನುವಾರ ಸಂಜೆ ಆಯೋಜಿಸಿದ್ದ ಕ್ರೈಸ್ತ ಐಕ್ಯತಾ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.


ಪವಿತ್ರ ವಾರದಲ್ಲಿ ಪ್ರಭು ಏಸುಕ್ರಿಸ್ತರ ಸಂಕಷ್ಟ, ಮರಣವನ್ನು ಧ್ಯಾನಿಸಲು ಕ್ರೈಸ್ತ ವಿಶ್ವಾಸಿಗಳು ಧ್ಯಾನಿಸುವ ವಿಶೇಷ ಸಮಯವಾಗಿದೆ. ನಮ್ಮ ಜೀವನದಲ್ಲಿ ಕಷ್ಟ, ಸಮಸ್ಯೆಗಳ ಶಿಲುಬೆಗಳನ್ನು ಹೊತ್ತು ಏಸುಸ್ವಾಮಿ ತೋರಿದ ಹಾದಿಯಲ್ಲಿ ಸಾಗಲು ಪವಿತ್ರ ವಾರ ಇನ್ನಷ್ಟು ಸಹಕಾರಿಯಾಗಿದೆ. ಶಿಲುಬೆ ಮೂಲಕ ಲೋಕಕ್ಕೆ ರಕ್ಷಣೆ ತೋರಿದ ಏಸುಕ್ರಿಸ್ತ ಪ್ರತಿಯೊಬ್ಬರನ್ನು ಹರಸಲಿ ಎಂದರು.


ಕ್ಯಾಂಪಸ್ ಕ್ರುಸೆಡ್ ಇಂಡಿಯಾ ಮಂಗಳೂರಿನ ಬ್ರದರ್ ರಮೇಶ್, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಡಾ.ರೊಕ್ ಡಿ'ಸೋಜ ದೇವರ ವಾಕ್ಯದ ಮೇಲೆ ಪ್ರಬೋಧನೆ ನೀಡಿದರು.
ಯುಬಿಎಂ ಕ್ರಿಸ್ತ ಕಾರುಣ್ಯ ಚರ್ಚ್ ಕಟಪಾಡಿ, ಯುಬಿಎಂ ಜುಬಿಲಿ ಚರ್ಚ್ ಉಡುಪಿ, ಯುಬಿಎಂ ಕ್ರಿಸ್ತ ಕೃಪಾ ಮಣಿಪಾಲ, ಯುಬಿಎಂ ಕ್ರಿಸ್ತ ಶಾಂತಿ ಚರ್ಚ್ ಉದ್ಯಾವರ, ಸಿಎಸ್ಐ ಎಬನೇಜರ್ ಮಲ್ಪೆ, ಸಂತ ಅನ್ನಮ್ಮ ಚರ್ಚ್ ತೊಟ್ಟಂ ಗಾಯನ ತಂಡಗಳಿಂದ ಸ್ತುತಿ ಗಾಯನ ಜರುಗಿತು.


ಕೆಥೊಲಿಕ್ ಧರ್ಮಗುರುಗಳಾದ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ.ವಿನ್ಸೆಂಟ್ ಕ್ರಾಸ್ತಾ, ವಂ.ವಿಲ್ಸನ್ ಡಿ'ಸೋಜ, ವಂ.ಅಶ್ವಿನ್ ಆರಾನ್ಹಾ, ಯುಬಿಎಂ ಚರ್ಚಿನ ವಂ.ಸಂತೋಷ್ ಎ, ವಂ.ಸ್ಟೀಫನ್ ಬಂಡಿ, ವಂ.ರಮೇಶ್ ಮುದಲಗಿ, ವಂ.ಮನೋಜ್ ವೈ.ಎಸ್, ವಂ.ವಿನಯ್ ಸಂದೇಶ್, ಹಿರಿಯರಾದ ಡೇನಿಯಲ್ ಜೆ‌ ಅಮ್ಮನ್ನ, ಸ್ಟಾವರ್ಿನ್ ಅಮ್ಮನ್ನ, ಮೋಹನ್ ಪಿ. ಅಮ್ಮನ್ನ, ಆಸ್ಟಿನ್ ಸಿಲ್ವ, ಸದಾನಂದ ಜತ್ತನ್ನ, ರೆನೋಲ್ಡ್ ಸಿ‌ ಜತ್ತನ್ನ, ಜನರಲ್ ಫಂಡ್ ಸಮಿತಿಯ ಎಡ್ವಿನ್ ಜತ್ತನ್ನ, ಸ್ಯಾಮುವೆಲ್ ಡಿ' ಕರ್ಕಡ, ಬೆಂಜಮಿನ್ ಜಯಕರ ಮಾಬೆನ್, ನಿಕ್ಷನ್ ಡಿ ಪಾಂಗಾಳಾನ್ನ, ರೆನೋಲ್ಡ್ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.


ಕುಮಾರ್ ಸಾಲಿನ್ಸ್ ಸ್ವಾಗತಿಸಿ, ಜುವೆಲ್ ವಂದಿಸಿದರು. ತೊಟ್ಟಂ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ನಿರೂಪಿಸಿದರು.