ಉಡುಪಿ ಕೋರ್ಟ್‌ಗೆ ಮತ್ತೆ ಬಾಂಬ್ ಬೆದರಿಕೆ!

ಲೋಕಬಂಧು ನ್ಯೂಸ್ | ಉಡುಪಿ, ಜೂ.27
ಕಳೆದ ಐದು ದಿನಗಳ ಹಿಂದೆಯಷ್ಟೇ ಹುಸಿ ಬಾಂಬ್ ಬೆದರಿಕೆಗೆ ಈಡಾಗಿದ್ದ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಶನಿವಾರ ಮತ್ತೆ ಈ-ಮೈಲ್ ಮೂಲಕ ಬೆದರಿಕೆ ಕರೆ ಬಂದಿದೆ.
ಕಳೆದ ಬಾರಿ ಬಂದಿದ್ದ ಕರೆಗೆ ವಕೀಲರು ಮತ್ತು ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು. ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ನಡೆಸಿದ ಬಳಿಕ ಅದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿತ್ತು.


ಮತ್ತೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಶ್ವಾನದಳ ಮತ್ತು ಬೆರಳಚ್ಚು ತಜ್ಞ ರು ತಪಾಸಣೆ ನಡೆಸಿದರು. ಆದರೆ, ನ್ಯಾಯಾಲಯದ ಕಲಾಪ ಸುಸೂತ್ರವಾಗಿ ನಡೆದು ವಕೀಲರ ಸಹಿತ ನ್ಯಾಯಾಲಯ ಸಿಬ್ಬಂದಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ!