ಲೋಕಬಂಧು ನ್ಯೂಸ್ | ಕಾರ್ಕಳ, ಮೇ 9
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟ್ರ ಮಟ್ಟದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ. ಲಿಖಿತ ಪರೀಕ್ಷೆಯಲ್ಲಿ ಇಲ್ಲಿನ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 11 ಮಂದಿ ಆಯ್ಕೆಯಾಗಿದ್ದಾರೆ.
ದ್ವಿತೀಯ ಪಿಯುಸಿಯ ಅಭಿಷೇಕ್ ಡಿ.ಜಿ., ಕೆ.ಎಸ್. ಗಣೇಶ, ಕಾನಿಷ್ಕ್ ಎಸ್. ಅಮೀನ್, ಮೋದಕ್ ಪಿ.ಆರ್, ಎನ್.ಎಸ್. ವಿವೇಕ್, ನಿಧೀಶ್ ಸುದೀಪ್ ಕುಮಾರ್, ರೋಚಕ್ ಪ್ರಮೋದ್ ಬಡಿಗೇರ್, ಸಾಯಿ ರಾಘವೇಂದ್ರ ಬಿ.ಎಸ್., ಶ್ರೀನಿವಾಸ ರೆಡ್ಡಿ ಮೇಟಿ, ವೀರೇಶ್ ಜಗದೀಶ್ ತೇಲಿ ಹಾಗೂ ವಿಶಾಲ್ ತೇರ್ಗಡೆಗೊಂಡಿದ್ದಾರೆ.
ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ 10 ಮಂದಿ ವಿದ್ಯಾರ್ಥಿಗಳು ಬಿ.ಟೆಕ್.ನಲ್ಲಿ, 6 ವಿದ್ಯಾರ್ಥಿಗಳು ಬಿ.ಆರ್ಕ್'ನಲ್ಲಿ, 11 ವಿದ್ಯಾರ್ಥಿಗಳು ಬಿ.ಪ್ಲಾನಿಂಗ್'ನಲ್ಲಿ 99 ಪರ್ಸಂಟೈಲ್'ಗಿಂತಅಧಿಕ ಅಂಕ ಪಡೆದಿರುವುದನ್ನಿಲ್ಲಿ ಸ್ಮರಿಸಬಹುದು.
ಸಾಧಕರನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.
