ವಿದ್ಯಾಪೋಷಕ್ 100ನೇ ಮನೆ ಹಸ್ತಾಂತರ

ಲೋಕಬಂಧು ನ್ಯೂಸ್ | ಹೆಬ್ರಿ, ಜೂ.28
ಉಡುಪಿಯ ಯಕ್ಷಗಾನ ಕಲಾರಂಗ ತನ್ನ 'ವಿದ್ಯಾಪೋಷಕ್' ಯೋಜನೆಯಡಿ ಶಿವಪುರ ಕಲ್ಮುಂಡದಲ್ಲಿ ನಿರ್ಮಿಸಿದ 100ನೇ ಮನೆ  ಶತಸ್ಮೃತಿಯನ್ನು ವಿದ್ಯಾಪೋಷಕ್'ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಅವರಿಗೆ ಭಾನುವಾರ ಹಸ್ತಾಂತರಿಸಲಾಯಿತು.
ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಮನೆ ಉದ್ಘಾಟಿಸಿ,‌ ಶಿಕ್ಷಣದೊಂದಿಗೆ ಸೂರು ಕಲ್ಪಿಸುವ ಸಂಸ್ಥೆಯ ಯೋಜನೆ ಕೃಷ್ಣ ಪ್ರೀತಿಯ ಕಾರ್ಯ ಎಂದು ಹೇಳಿ, ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಯಕ್ಷಗಾನ ಶಿಕ್ಷಣದ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಯಕ್ಷಗಾನ ಕಲಾರಂಗ ಇತರ ಸಂಘಸಂಸ್ಥೆಗಳಿಗೆ ಮಾದರಿ ಎಂದರು.


ಯಕ್ಷಗಾನ‌ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಳ್ಳಿ, ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಮಾಜಿ ಅಧ್ಯಕ್ಷ ಕೆ.ಗಣೇಶ ರಾವ್, ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ ಮೊದಲಾದವರಿದ್ದರು.